8th August 2021

ಮನದಂಗಳ
- ರಮ್ಯ.ಹೆಚ್ ಸಹಾಯಕ ಪ್ರಾಧ್ಯಾಪಕಿ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗಕಣ್ಣಿಗೆ ಭಾಷೆಯನು ಕಲಿಸಿದವರು ಯಾರು?
ಮೌನಕೆ ಅರ್ಥವ ತುಂಬಿದವರು ಯಾರು?
ನೆನಪಿಗೆ ಮರೆಯಲು ತಿಳಿಸಿದವರು ಯಾರು?
ಭಾವನೆಗೆ ಬಣ್ಣ ಹಚ್ಚಿದವರು ಯಾರು?
ಕನಸಿಗೆ ಕಲ್ಪನೆಯ ಬೆರೆಸಿದವರು ಯಾರು?
ಯಾರು? ನೀ ಯಾರು?
ನೆನ್ನೆಗಳ ನೋವನ್ನು ಮರೆಸುವವರು ಯಾರು?
ನಾಳೆಗೆ ನಂಬಿಕೆಯ ನೀಡುವವರು ಯಾರು?
ಗೆಲುವಿಗೆ ಸ್ಫೂರ್ತಿಯ ತುಂಬುವವರು ಯಾರು?
ಸೋಲಿಗೆ ಸಾಂತ್ವನ ಹೇಳುವವರು ಯಾರು?
ಜೀವಕ್ಕೆ ಜೊತೆಯಾಗಿ ನಿಲ್ಲುವವರು ಯಾರು?
ಯಾರು? ನೀ ಯಾರು?
ಯಾರು ಯಾರೆಂದು ಹುಡುಕಿದರು ಸಿಗರು
ಹುಡುಕುತ್ತಾ ನೀ ಕಳೆದು ಹೋಗದಿರು
ನಿನ್ನೊಳಗೆ ಅಡಗಿರುವ ನಿನ್ನ ನೀ ತಿಳುದುಕೋ
ಜೀವಂತ ಜೀವವ ಕಂಡುಕೋ
ಮರೆಯಾಗೋ ಮುನ್ನ, ಅರಿತುಕೋ ನಿನ್ನ.